ಕರಾವಳಿಯಲ್ಲಿ ಉದ್ಯೋಗ ಸೃಷ್ಟಿಗೆ ಸಿಲಿಕಾನ್ ಸರ್ಫ್: ಎಂ. ಜಿ. ಬಾಲಕೃಷ್ಣಕರಾವಳಿಯಲ್ಲಿ ಮೀನುಗಾರಿಕೆ, ಕೃಷಿ ಸಂಸ್ಕರಣೆ ಮತ್ತು ಸಾಗರ ರಪ್ತುಗಳಿಗೆ ಅಗತ್ಯ ನೀತಿ ರೂಪಿಸಲು, ಕೈಗಾರಿಕಾ ಕಾರಿಡಾರ್ಗಳನ್ನು ಬಲಪಡಿಸಲು, ಪ್ರವಾಸೋದ್ಯಮ ಮೂಲ ಸೌರ್ಕಯವನ್ನು ಹೆಚ್ಚಿಸಲು, ಉತ್ತಮ ರಸ್ತೆ ಜಾಲಗಳು, ವಿಮಾನ ನಿಲ್ದಾಣ ಮತ್ತು ರೈಲು ಸಂಪರ್ಕಗಳನ್ನು ಅಭಿವೃದ್ಧಿಪಡಿಸಲು ಶೀಘ್ರವೇ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಲಾಗುವುದು. ಅದೇ ರೀತಿ ಕೈಗಾರಿಕಾ ನೀತಿಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಸರಳೀಕರಣ ಮಾಡುವ ಕುರಿತು ಪ್ರಯತ್ನ ಮಾಡಲಾಗುವುದು ಎಂದು ಎಂ.ಜಿ. ಬಾಲಕೃಷ್ಣ ತಿಳಿಸಿದ್ದಾರೆ.