14ರಿಂದ ದೊಡ್ಡಣಗುಡ್ಡೆ ತೋಟಗಾರಿಕಾ ಇಲಾಖೆಯಲ್ಲಿ ಮಾವು ಮೇಳಮೇಳದಲ್ಲಿ ಸ್ಥಳೀಯ ಮತ್ತು ಹೊರಜಿಲ್ಲೆಗಳ ವಿವಿಧ ಮಾವು ತಳಿಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸ್ಥಳೀಯ ತಳಿಗಳಾದ ಬನೆಡ್, ಅಪುಸ್, ಮುಂಡಪ್ಪ, ಕದ್ರಿ, ಪೈರಿ, ಕಳಕ್ಟರ್, ಕಾಲಪ್ಪಾಡಿ, ಹೊರಜಿಲ್ಲೆಯ ತಳಿಗಳಾದ ಮಲ್ಲಿಕ, ಮಲಗೋವಾ, ನೀಲಂ, ಸಿಂಧೂರ, ಬಂಗನಪಲ್ಲಿ, ಕೇಸರಿ, ದಶಹರಿ ಮತ್ತು ಶುಗರ್ ಬೇಬಿ ಎನ್ನುವ ಹಲವು ರುಚಿಕರ ಮತ್ತು ಜನರು ಅತೀ ಹೆಚ್ಚು ಇಷ್ಟ ಪಡುವ ಆರೋಗ್ಯಕರ ಮಾವುಗಳು ಈ ಮೇಳದಲ್ಲಿ ಸಾರ್ವಜನಿಕರಿಗೆ ಖರೀದಿಸಲು ಲಭ್ಯವಿರುತ್ತದೆ.