ಮಂಗನ ಕಾಯಿಲೆ: ಮಲೆನಾಡ ತಪ್ಪಲಲ್ಲಿ ಮುನ್ನೆಚ್ಚರಿಕಾ ಕ್ರಮಮಲೆನಾಡು ಜಿಲ್ಲೆಗಳಲ್ಲಿ ಮಂಗನಕಾಯಿಲೆ ವ್ಯಾಪಕವಾಗಿ ಹರಡುತ್ತಿದ್ದು, ಮಲೆನಾಡ ತಪ್ಪಲಿನ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಕಾಡಂಚಿನ ಊರುಗಳಾದ ಹೆಬ್ರಿ, ನಾಡ್ಪಾಲು, ಮುನಿಯಾಲು ಹಾಗೂ ಮರ್ಣೆ, ಕೆರುವಾಶೆ, ಮಾಳ, ನಾಡ್ಪಾಲು, ಈದು, ನೂರಲ್ಬೆಟ್ಟು ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.