ಉಡುಪಿ: ಡಾ. ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ನರ ಶಸ್ತ್ರಚಿಕಿತ್ಸಾ ಸೇವೆಗಳು ಆರಂಭಡಾ. ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ನರಶಸ್ತ್ರಚಿಕಿತ್ಸಾ ಸೇವೆಗಳು ಪ್ರತಿ ಗುರುವಾರ ಮಧ್ಯಾಹ್ನ 12ರಿಂದ ಸಂಜೆ 4ರ ವರೆಗೆ ಹೊರರೋಗಿ ಸಮಾಲೋಚನೆಗಳನ್ನು ಒಳಗೊಂಡಿರುತ್ತವೆ. ಬೆನ್ನು ಮತ್ತು ಕುತ್ತಿಗೆ ನೋವು, ಕಾಲು ನೋವು, ಕೋಕ್ಸಿಜಿಯಲ್ ನೋವು(ಬಾಲ ಮೂಳೆ ಪ್ರದೇಶದಲ್ಲಿ ನೋವು), ಮೆದುಳಿನ ಗೆಡ್ಡೆಗಳು, ನರಗಳ ಸಂಕೋಚನ, ತಲೆಯ ಗಾಯಗಳು ಮತ್ತು ಇತರ ನರ ಸಂಬಂಧಿತ ಸಮಸ್ಯೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ನರವೈಜ್ಞಾನಿಕ ಪರಿಸ್ಥಿತಿಗಳ ಬಗ್ಗೆ ತಜ್ಞರಿಂದ ಸಲಹೆ ಪಡೆಯಬಹುದು.