ಪರಿಸರ ಅಸಮತೋಲನ: ಪಕ್ಷಿ ವಲಸೆ ಪ್ರಮಾಣ ಭಾರಿ ಕುಸಿತಪ್ರತಿ ವರ್ಷ ನವೆಂಬರ್ನಿಂದ ಫೆಬ್ರವರಿ ಮೊದಲ ವಾರದಲ್ಲಿ ಹಕ್ಕಿಗಳು ಕರಾವಳಿಯತ್ತ ವಲಸೆ ಬರುವುದು ವಾಡಿಕೆ. ಫೆಬ್ರವರಿಯಲ್ಲಿ ಹಕ್ಕಿಗಳ ವೀಕ್ಷಣೆ ಹಾಗೂ ಎಣಿಕೆ ಕಾರ್ಯಕ್ಕೆ ಸೂಕ್ತ ಸಮಯವಾಗಿದೆ. ಹಕ್ಕಿಗಳು ಯುರೋಪ್, ಮಧ್ಯ ಏಷ್ಯಾ, ಉತ್ತರ ಏಷ್ಯಾ ಮತ್ತು ಹಿಮಾಲಯಗಳಿಂದ ಮಂಗಳೂರಿಗೆ ವಲಸೆ ಬರುತ್ತವೆ. ಆದರೆ ಈ ಬಾರಿ ಹಕ್ಕಿಗಳ ವಲಸೆಯಲ್ಲಿ ಭಾರಿ ಕುಸಿತವಾಗಿದೆ.