ಕಡಿಯಾಳಿ ದೇವಸ್ಥಾನದಲ್ಲಿ ಕಳವಿಗೆ ಯತ್ನ: ಆರೋಪಿಗಳ ಬಂಧನಆರೋಪಿಗಳಲ್ಲಿ ಒಬ್ಬಾತ ದೇವಸ್ಥಾನದ ದ್ವಾರ ಬಾಗಿಲನ್ನು ಒಡೆಯಲು ಪ್ರಯತ್ನಿಸುತ್ತಿದ್ದ. ಅಲ್ಲೇ ಇದ್ದ ಕಾವಲುಗಾರ ಬೊಬ್ಬೆ ಹಾಕಿ ಆತನನ್ನು ಹಿಡಿಯಲು ಹೋದಾಗ ಇಬ್ಬರೂ ಆರೋಪಿಗಳು ಅಲ್ಲಿಂದ ಪರಾರಿಯಾದರು. ಅವರಲ್ಲೊಬ್ಬನಿಗೆ ಮೂರ್ಚೆರೋಗವಿದ್ದು, ಓಡುವಾಗ ಅಲ್ಲಿನ ಪೆಟ್ರೋಲ್ ಬಂಕ್ ಬಳಿ ಕುಸಿದು ಬಿದ್ದ. ಇನ್ನೊಬ್ಬ ಆತನನ್ನು ಉಪಚರಿಸತೊಡಗಿದ.