20ರಂದು ಉಡುಪಿ ಡಾ. ಟಿ.ಎಂ.ಎ. ಪೈ ಆಸ್ಪತ್ರೆಯಲ್ಲಿ ಲಿಂಫೆಡೆಮಾ ತಪಾಸಣಾ ಶಿಬಿರಈ ಶಿಬಿರದಲ್ಲಿ ದೀರ್ಘಕಾಲದ ಫೈಲೇರಿಯಾಸಿಸ್, ಮೇಲಿನ ಅಥವಾ ಕೆಳಗಿನ ಅಂಗಗಳಲ್ಲಿ ದೀರ್ಘಕಾಲದ ಊತ, ಕೈಕಾಲುಗಳಲ್ಲಿ ನಿರಂತರ ನೋವು ಅಥವಾ ಅಸ್ವಸ್ಥತೆ ಅಥವಾ ವಾಸಿಯಾಗದ ಹುಣ್ಣುಗಳಿಂದ ಬಳಲುತ್ತಿರುವವರಿಗೆ ತಜ್ಞರೊಂದಿಗೆ ಸಮಾಲೋಚಿಸಲು ಮತ್ತು ಪರಿಣಾಮಕಾರಿ ಚಿಕಿತ್ಸಾ ಕ್ರಮಗಳನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗುತ್ತದೆ. ತಜ್ಞರೊಂದಿಗೆ ಸಮಾಲೋಚನೆ ಉಚಿತವಾಗಿದ್ದು, ಶೇ.20ರ ರಿಯಾಯಿತಿಯಲ್ಲಿ ಇತರ ಅವಶ್ಯ ಪರೀಕ್ಷೆಗಳನ್ನು ಮಾಡಲಾಗುವುದು.