ಅತ್ತೂರು ಬಸಿಲಿಕಾ ಮಹೋತ್ಸವ: ಹರಿದು ಬಂದ ಭಕ್ತ ಸಾಗರಬಸಿಲಿಕಾದ ವಠಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಬೆಳಕು ಮತ್ತು ಅಲಂಕಾರಗಳಿಂದ ಆಕರ್ಷಕವಾಗಿ ಸಿಂಗಾರಗೊಂಡಿದ್ದವು. ಸರ್ವಧರ್ಮ ಸೌಹಾರ್ದತೆಯನ್ನು ಪ್ರತಿಬಿಂಬಿಸುವ ವಿಧಿಗಳಲ್ಲಿ ವಿಭಿನ್ನ ಧರ್ಮಗಳ ಜನರು ಭಾಗವಹಿಸಿದರು. ಭಕ್ತರು ಸಂತ ಲಾರೆನ್ಸ್ ಅವರ ಪವಾಡಗಳನ್ನು ಸ್ಮರಿಸಿ, ತಮ್ಮ ಬಿನ್ನಹಗಳನ್ನು ಸಲ್ಲಿಸಿ, ಆಶೀರ್ವಾದ ಪಡೆದರು.