ಶಿರಸಿ ನಗರಸಭೆ ಪೈಪ್ ಕಳ್ಳತನ ಪ್ರಕರಣ: ಅಧಿಕಾರಿಗಳು, ಸದಸ್ಯರು ಭಾಗಿಶಿರಸಿ ನಗರಸಭೆ ಪೈಪ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯಲ್ಲಿ ನಗರಸಭೆ ಕಮಿಷನರ್ ಕಾಂತರಾಜು, ಜೂನಿಯರ್ ಎಂಜಿನಿಯರ್ ಸುಫಿಯಾನ್ ಬ್ಯಾರಿ, ಎಇಇ ಪ್ರಶಾಂತ ವೆರ್ಣೇಕರ, ನಗರಸಭೆ ಸದಸ್ಯರಾದ ಗಣಪತಿ ನಾಯ್ಕ, ಕುಮಾರ ಬೋರ್ಕರ್, ಯಶವಂತ ಮರಾಠಿ ಭಾಗಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಹೇಳಿದರು.