ಶ್ರೀಮಂತ ಕುಟುಂಬವಾದ್ರು, ಸಾಮಾನ್ಯರೊಂದಿಗೆ ಜೀವನಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ನಾನು ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದವನು. ಬಲದಿನ್ನಿ ನಾಡಗೌಡ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರೂ ಸಾಮಾನ್ಯನಾಗಿ ಬಡವರ ಜೊತೆ ಬೆಳೆದಿದ್ದೇನೆ. ಅವರ ಕಷ್ಟಗಳನ್ನು ರೈತರ ಪರಿಸ್ಥಿತಿ ಏನು ಎಂಬುದರ ಬಗ್ಗೆ ತಿಳಿದಿದ್ದೇನೆ. ಆಡಂಭರದ ಜೀವನ ಯಾವತ್ತು ನಡೆಸಿದವನಲ್ಲ. ಬಡವರು, ರೈತರಲ್ಲಿ ದೇವರನ್ನು ಕಾಣುವ ಸ್ವಭಾವದವನು ನಾನು. ಹಾಗಾಗಿಯೇ ಜನರು ನನ್ನನ್ನು ಆರು ಬಾರಿ ಶಾಸಕನನ್ನಾಗಿ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ದಿಯ ಮೂಲಕ ಅವರ ಋಣ ತೀರಿಸುತ್ತೇನೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಅಂತರಾಳವನ್ನು ತೆರೆದಿಟ್ಟರು.