ನರೇಗಾದಡಿ ಜೀವಕಳೆ ಪಡೆದ ಅಕ್ಕನಾಗಮ್ಮ ಕೆರೆ!ಗ್ರಾಮೀಣ ಭಾಗದ ಜನರಿಗೆ ನರೇಗಾ ವರವಾಗಿ ಪರಿಣಮಿಸಿದೆ. ದುಡಿಯಲು ಗೂಳೆ ಹೋಗುತ್ತಿದ್ದ ಜನರಿಗೆ ಕೆಲಸ ನೀಡಿ ಜೀವನ ನಡೆಸಲು ಅನುವು ಮಾಡಿಕೊಟ್ಟಿದೆ. ಅಲ್ಲದೇ ನರೇಗಾದಡಿಯಲ್ಲಿ ಹಾಳಾದ, ಅಸ್ವಚ್ಛತೆಯಿಂದ ಕೂಡಿರುವ ಕೆರೆಗಳಿಗೆ ಕಾಯಕಲ್ಪ ನೀಡುವ ಕೆಲಸ ಕೂಡ ಆಗುತ್ತಿದೆ. ಹೀಗಾಗಿಯೇ ಅಕ್ಕನಾಗಮ್ಮ ಕೆರೆಗೆ ಇದೀಗ ಜೀವಕಳೆ ಬಂದಿದ್ದು, ಪ್ರಾಣಿಗಳಿಗೆ ಆಸರೆಯಾಗಿ, ಅಂತರ್ಜಲ ವೃದ್ಧಿಗೆ ಕಾರಣವಾಗಿದೆ.