ಅಭಿನಂದಿಸುವ ವ್ಯಕ್ತಿ ಗುಣ ತೋರಿಸುವ ಆಚಾರ, ವಿಚಾರಕನ್ನಡಪ್ರಭ ವಾರ್ತೆ ವಿಜಯಪುರ ವಸುದೇವ ಕುಟುಂಬಕಂ ಎನ್ನುವ ನಾಣ್ಣುಡಿಯ ಸಾರ್ಥಕ ಭಾವಕ್ಕೆ ಹೋಲುವ ಎನ್.ಆರ್.ಕುಲಕರ್ಣಿ ಅವರು ಒಬ್ಬ ಸದ್ಗುಣ, ಸಹೃದಯಿ ವ್ಯಕ್ತಿ. ಇವರ ಬಕುಲ ಪುಷ್ಪ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭಕ್ಕೆ ಬಂದಿರುವುದು ನಮ್ಮ ಸುದೈವ ಎಂದು ನಾಗಣಸೂರಿನ ಬಮ್ಮಲಿಂಗೇಶ್ವರ ಬೃಹನ್ಮಠದ ಪೂಜ್ಯ ಶ್ರೀ ಷ.ಬ್ರ.ಶ್ರೀಕಂಠ ಶಿವಾಚಾರ್ಯ ಮಹಾಸ್ವಾಮೀಜಿಗಳು ಹೇಳಿದರು.