ಶಿವಕುಮಾರ ಸಕ್ಕರೆ ಕಾರ್ಖಾನೆ ಬಂದ್ ಮಾಡಿಸಿದ್ದು ಸಚಿವ ಪಾಟೀಲಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿರುವ ಜ್ಞಾನಯೋಗಿ ಶಿವಕುಮಾರ ಸಕ್ಕರೆ ಕಾರ್ಖಾನೆ ಬಂದ್ ಮಾಡಿಸಿದ ಪುಣ್ಯಾತ್ಮ ಯಾರಾದರೂ ಇದ್ದರೆ ಅದು ಸಚಿವ ಶಿವಾನಂದ ಪಾಟೀಲ. ಅಂತಹ ಪುಣ್ಯಾತ್ಮನನ್ನು ಹುಲಿ...ಹುಲಿ ಎಂದು ಕೊಂಡಾಡುತ್ತಿರಿ. ಆಳಂದ ತಾಲೂಕಿನಲ್ಲಿ ಆರಂಭಿಸಿದ ಆ ಕಾರ್ಖಾನೆಯೂ ಬಂದ್ ಮಾಡಿಸಲು ಹೊರಟಿದ್ದಾರೆ. ನನ್ನ ಮೇಲೂ ಕೇಸ್ ಹಾಕಿಸಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಚಿವ ಶಿವಾನಂದ ಪಾಟೀಲ ಮೇಲೆ ಹರಿಹಾಯ್ದರು.