ಇಂಡಿ ಶಾಖಾ ಕಾಲುವೆ ನೀರು ಹರಿಸುವಂತೆ ರೈತರ ಆಗ್ರಹವಿಜಯಪುರ: ಜಿಲ್ಲೆಯ ಚಡಚಣ ತಾಲೂಕು ಕೊನೆ ಭಾಗದವರೆಗೆ ನೀರು ಹರಿಸಬೇಕು ಎಂದು ಚಡಚಣ ತಾಲೂಕು ರೈತರು ಝಳಕಿಯಲ್ಲಿರುವ ಕೆಬಿಜೆಎನ್ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಇಂಡಿ ಶಾಖಾ ಕಾಲುವೆ ನಾರಾಯಣಪುರ ಎಡದಂಡೆ ಕಾಲುವೆಯ ಕೊನೆಗೆ 130 ಕಿಮೀದಿಂದ 172 ವರೆಗೆ ಹಳ್ಳಿಗಳಾದ ಹಲಸಂಗಿ, ಏಳಗಿ ರೇವತಗಾಂವ, ಹಾವಿನಾಳ, ಹತ್ತಳ್ಳಿ, ನಿವರಗಿ, ದಸೂರ, ಉಮರಾಜ ಸೇರಿದಂತೆ ಚಡಚಣ ತಾಲೂಕಿಗೆ ನೀರು ಹರಿಸಿ ಎಂದು ರೈತರು ಆಗ್ರಹಿಸಿದರು.