ಒಂದೆಡೆ ಖುಷಿ, ಮತ್ತೊಂದೆಡೆ ದುಗುಡ!ಕೊಳವೆಬಾವಿಯಲ್ಲಿ ಬಿದ್ದ ಮಗ ಸಾತ್ವಿಕ್ ಸುರಕ್ಷಿತವಾಗಿ ಹೊರಬಂದಿದ್ದಕ್ಕೆ ತಂದೆ ಖುಷಿಗೆ ಪಾರವೇ ಇರಲಿಲ್ಲ. ಸಾವನ್ನೇ ಜಯಿಸಿದ ಮಗನಿಗಾಗಿ ತಂದೆಗೆ ಅದೊಂದು ಯುದ್ಧವನ್ನೇ ಜಯಿಸಿದಂತಾಗಿತ್ತು. ಆದರೆ, ಬೆಳಕಿನ ಬುಡಕ್ಕೆ ಕತ್ತಲೆ ಎಂಬಂತೆ ಮಗನ ರಕ್ಷಣೆಗಾಗಿ ಅಗೆದ ಭೂಮಿಯನ್ನು ಲಕ್ಷ ಲಕ್ಷ ಖರ್ಚು ಮಾಡಿ ಮುಚ್ಚಬೇಕು ಎಂಬ ಚಿಂತೆ ಇದೆ ತಂದೆಯನ್ನು ಈಗ ಬಾಧಿಸತೊಡಗಿದೆ. ಇದರ ಮಧ್ಯೆ ಅವಘಡಕ್ಕೆ ಕಾರಣವಾದ ರೈತನ ಮೇಲೆ ಹಾಗೂ ಬೋರ್ವೆಲ್ ಕೊರೆದು ಮುಚ್ಚಳ ಹಾಕದೇ ಹಾಗೆ ಬಿಟ್ಟಿರುವ ಬೋರ್ವೆಲ್ ಏಜೆನ್ಸಿ ಮೇಲೆ ಎಫ್ಐಆರ್ ದಾಖಲು ಮಾಡುವಂತೆ ಜಿಲ್ಲಾಡಳಿತ ಸಹಿತ ಸೂಚನೆ ನೀಡಿದೆ. ಹೀಗಾಗಿ ಸಾತ್ವಿಕ ತಂದೆ ಸತೀಶಗೆ ಈಗ ನುಂಗಲಾರದ ಸಂಕಟವೊಂದು ಆವರಿಸಿದೆ.