ಚುನಾವಣೆಗೆ ನಿಯುಕ್ತಿಗೊಂಡ ಸಿಬ್ಬಂದಿಗೆ ತರಬೇತಿಬಸವನಬಾಗೇವಾಡಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲೋಕಸಭಾ ಚುನಾವಣೆಗೆ ನಿಯುಕ್ತಿಗೊಂಡಿರುವ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಮತ್ತು ಮತಗಟ್ಟೆ ಅಧಿಕಾರಿಗಳಿಗೆ ಭಾನುವಾರ ಮೊದಲ ಹಂತದ ತರಬೇತಿ ಆಯೋಜಿಸಲಾಗಿತ್ತು. ನಿಯುಕ್ತಿಗೊಂಡ ಪಿಆರ್ಒ, ಎಆರ್ಒ ಸಿಬ್ಬಂದಿ ಆಗಮಿಸಿ ಹಾಜರಾತಿಗೆ ಸಹಿ ಮಾಡಿದ ನಂತರ ತಮಗೆ ನಿಗದಿ ಪಡಿಸಿದ ಕೋಣೆಗಳಿಗೆ ತೆರಳಿ ಮಾಸ್ಟರ್ ಟ್ರೇನರ್ಗಳಿಂದ ಮತಗಟ್ಟೆ ಅಧ್ಯಕ್ಷಾಧಿಕಾರಿಗಳ ಮತ್ತು ಮತಗಟ್ಟಿ ಅಧಿಕಾರಿಗಳ ಕರ್ತವ್ಯಗಳು, ಚುನಾವಣಾ ಆಯೋಗ ನೀಡಿದ ಮಾಹಿತಿಗಳ ಕುರಿತು ತರಬೇತಿಯಲ್ಲಿ ಮಾಹಿತಿ ನೀಡಲಾಯಿತು.