ನಾಡಿಗೆ ದಾಸೋಹದ ಮಹತ್ವ ಸಾರಿದ ಡಾ.ಶಿವಕುಮಾರ ಶ್ರೀವಿಶ್ವಗುರು ಬಸವೇಶ್ವರರ ದಾಸೋಹ ತತ್ವವನ್ನು ಅಳವಡಿಸಿಕೊಳ್ಳುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಜ್ಞಾನ, ಅನ್ನ ದಾಸೋಹ ಕೈಗೊಳ್ಳುವ ಮೂಲಕ ಇಡೀ ಜಗತ್ತಿಗೆ ದಾಸೋಹದ ಮಹತ್ವವನ್ನು ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ತಿಳಿಸಿಕೊಟ್ಟಿದ್ದರಿಂದಲೇ ಅವರ ಜನ್ಮದಿನವನ್ನು ದಾಸೋಹ ದಿನವನ್ನಾಗಿ ಆಚರಿಸುವ ಮೂಲಕ ಅವರಿಗೆ ಇಡೀ ನಾಡು ನಮನ ಸಲ್ಲಿಸುತ್ತಿದೆ ಎಂದು ಯರನಾಳ ವಿರಕ್ತಮಠದ ಗುರುಸಂಗನಬಸವ ಸ್ವಾಮೀಜಿ ಹೇಳಿದರು.