ಪು-2ಕ್ಕೆ ಇಂದಿನಿಂದ ಶ್ರೀಗುರುಚಕ್ರವರ್ತಿ ಸದಾಶಿವ ಜಾತ್ರೆ ಆರಂಭವಿಜಯಪುರ: ಏ.8 ರಿಂದ 12ರವರೆಗೆ ತಾಲೂಕಿನ ಕತಕನಹಳ್ಳಿ ಶ್ರೀ ಗುರುಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಕತಕನಹಳ್ಳಿ ಸದಾಶಿವ ಮಠದ ಪೀಠಾಧಿಪತಿ ಪೂಜ್ಯ ಶಿವಯ್ಯ ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ಕತಕನಹಳ್ಳಿ ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶ್ರೀಸದಾಶಿವನ ಭಕ್ತರು ಪ್ರತಿವರ್ಷ ಜಾತ್ರೆ ಹಮ್ಮಿಕೊಳ್ಳುತ್ತಿದ್ದು, ಈ ವರ್ಷ ಮಠದ ಪರಂಪರೆಯನ್ನು ಸಾರುವ ಶ್ರೀ ಗುರುಚಕ್ರವರ್ತಿ ಸದಾಶಿವ ಶಿವಯೋಗಿ ಸಿದ್ಧರಾಮೇಶ್ವರ ಲೀಲಾಮೃತ ಗ್ರಂಥ ಲೋಕಾರ್ಪಣೆಯಾಗಲಿದೆ. ಹಾಗಾಗಿ ಇದೊಂದು ವಿಶೇಷ ಜಾತ್ರೆಯಾಗಿ ಭಕ್ತರ ಮನದಲ್ಲಿ ಉಳಿಯಲಿದೆ ಎಂದು ಹೇಳಿದರು.