ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ ಮುಖ್ಯ: ಡಾ.ರಾಜಕುಮಾರದೇವರಹಿಪ್ಪರಗಿ: ಸರ್ಕಾರಿ ನೌಕರಿಯಾಗಲಿ, ಖಾಸಗಿ ಉದ್ಯೋಗದಲ್ಲಾಗಲಿ ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ ಬೆಳೆಸಿಕೊಂಡರೆ ಯಾವ ಟೀಕೆ, ಟಿಪ್ಪಣಿಗಳು ಎದುರಾದರೂ ಕ್ಷಣದಲ್ಲಿ ಮಾಯವಾಗುತ್ತವೆ ಎಂದು ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡೀನ್ ಹಾಗೂ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ರಾಜಕುಮಾರ ಮಾಲಿಪಾಟೀಲ ಹೇಳಿದರು.