ಡೆಂಘೀ ಮುನ್ನಚ್ಚರಿಕೆಗೆ ಯಾವುದೇ ತರಹದ ತಯಾರಿ ಇಲ್ಲ: ವಿಜಯಕುಮಾರ ಕಿಡಿಡೆಂಘೀ ಮಹಾಮಾರಿ ರಾಜ್ಯದಲ್ಲಿ ಕಾಡುತ್ತಿದೆ. ರಾಜ್ಯದಲ್ಲಿ 7,125 ಡೆಂಘೀ ಕೇಸ್ ಪತ್ತೆಯಾಗಿ ಓರ್ವ ವೈದ್ಯ, ಏಳು ಜನರನ್ನು ಕಳೆದುಕೊಂಡರೂ ವಿಜಯಪುರದಲ್ಲಿ ಯಾವುದೇ ತರಹದ ತಯಾರಿ ಹಾಗೂ ಫಾಗಿಂಗ್ ಸಿಂಪಡಿಸುವಿಕೆ, ನೀರು ನಿಲ್ಲುವ ತೆಗ್ಗುಗಳನ್ನು ಮುಚ್ಚುವುದು ಕಂಡು ಬರುತ್ತಿಲ್ಲ ಎಂದು ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠ ಬಿಜೆಪಿ ರಾಜ್ಯ ಸಂಚಾಲಕ ವಿಜಯಕುಮಾರ ಕುಡಿಗನೂರ ದೂರಿದ್ದಾರೆ.