ಬಂಜಾರ ಸಮಾಜದ ಬೆಂಬಲ ಕಾಂಗ್ರೆಸ್ಗೆ: ಅರ್ಜುನ ರಾಠೋಡ,ಇಂಡಿ: ಒಳ ಮೀಸಲಾತಿ ಜಾರಿಗೆ ತಂದು ಬಂಜಾರ ಸಮಾಜಕ್ಕೆ ಅನ್ಯಾಯ ಮಾಡಿದ ಬಿಜೆಪಿ ಸರ್ಕಾರಕ್ಕೆ ಈ ಬಾರಿ ಬಂಜಾರ ಸಮಾಜ ತಕ್ಕ ಪಾಠ ಕಲಿಸಲಿದೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಮ್ಮ ಸಮಾಜ ತಕ್ಕ ಪಾಠ ಕಲಿಸಿದ್ದು, ಲೋಕಸಭಾ ಚುನಾವಣೆಯಲ್ಲಿಯೂ ನಮ್ಮ ಶಕ್ತಿ ಏನೆಂಬುದನ್ನು ತೋರಿಸಲಿದ್ದೇವೆ ಎಂದು ಬಂಜಾರ ಸಮಾಜದ ಮುಖಂಡ, ಜಿಪಂ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ್ ಹೇಳಿದ್ದಾರೆ.