ನೀರಿಲ್ಲ..ನೀರಿಲ್ಲ ಪ್ರಾಣಿ, ಪಕ್ಷಿಗಳಿಗೂ ನೀರಿಲ್ಲ...!ಬರಗಾಲದಿಂದ ಜಲಮೂಲಗಳು ಬರಿದಾಗಿವೆ. ಇದರಿಂದ ಗ್ರಾಮೀಣ ಪ್ರದೇಶದ ಕೆರೆಗಳು, ಹಳ್ಳಕೊಳ್ಳ, ನದಿಗಳು ತೆರೆದ ಬಾವಿಗಳು ಖಾಲಿಖಾಲಿ ಆಗಿವೆ. ಇದರಿಂದ ಪ್ರಾಣಿಗಳಿಗೆ, ಪಕ್ಷಿಗಳಿಗೆ ನೀರು ನಿಲ್ಲದೇ ಅವುಗಳ ಜೀವಕ್ಕೂ ಸಂಚಕಾರ ಎದುರಾಗಿದೆ. ಅಲ್ಲಲ್ಲಿ ತುಸು ಉಳಿದ ನೀರನ್ನು ಹಕ್ಕಿ-ಪಕ್ಷಿಗಳು ಕುಡಿಯಲು ಹೆಣಗಾಡುತ್ತಿರುವುದು ಮನಕಲಕುವಂತಿದೆ.