ಕತ್ತಲಲ್ಲಿ ಮುಳುಗಿದ ಇಂಡಿ ಪಟ್ಟಣ!ಇಂಡಿ: ಪಟ್ಟಣದ ಬೀದಿ ದೀಪಗಳು ಕೆಟ್ಟು ನಿಂತಿರುವ ಕಾರಣ ನಾಗರಿಕರು ರಾತ್ರಿ ಜೀವ ಭಯದಲ್ಲೇ ಸಂಚರಿಸುವಂತಾಗಿದೆ. ಪಟ್ಟಣದಲ್ಲಿ ಸುಮಾರು ತಿಂಗಳಿನಿಂದ ಅಗರಖೇಡ ರಸ್ತೆಯಲ್ಲಿ 15, ಸಿಂದಗಿ ರಸ್ತೆಯಲ್ಲಿ 22, ವಿಜಯಪುರ ರಸ್ತೆಯಲ್ಲಿ 24 ಹಾಗೂ ಅಗರಖೇಡ ರಸ್ತೆಯಲ್ಲಿ 8 ಸೇರಿ ಒಟ್ಟು 69 ಬೀದಿ ದೀಪಗಳು ಸುಟ್ಟರೂ ಪುರಸಭೆ ಅವುಗಳಿಗೆ ಬಲ್ಬ್ ಹಾಕದೇ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.