ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಇತಿಹಾಸ ಸೃಷ್ಟಿ ಆಗಲಿವಿಜಯಪುರ: ಜೂನ್ ನಂತರ ಸರ್ಕಾರಿ ಶಾಲೆಗಳ ಪ್ರವೇಶ ದಾಖಲಾತಿಯಲ್ಲಿ ವಿಜಯಪುರ ನಗರ ಇತಿಹಾಸ ಸೃಷ್ಟಿಸುವಂತಾಗಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದ ವಾರ್ಡ್ ನಂ.೧೩ರಲ್ಲಿ ಬರುವ ಶಾಪೇಟೆ ಸರ್ಕಾರಿ ಕೆಬಿಎಸ್ ನಂ.೭ ಮತ್ತು ೮ ರಲ್ಲಿ ವಿವೇಕ ಶಾಲಾ ಕೊಠಡಿ ಯೋಜನೆಯಡಿ ನೂತನವಾಗಿ ನಿರ್ಮಾಣ ಮಾಡಲಾದ ೪ ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಕ್ಕಳ ಪ್ರವೇಶ ಆಗುತ್ತಿದೆ ಎಂಬ ಸಂದೇಶ ಇಡೀ ರಾಜ್ಯಕ್ಕೆ ಹೋಗುವ ರೀತಿಯಲ್ಲಿ, ನಮ್ಮ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ, ಅತ್ಯುತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಮಾಡೋಣ, ಬಡವರು, ಶ್ರೀಮಂತರು ಎನ್ನದೇ, ಎಲ್ಲಾ ಮಕ್ಕಳು ಸಹ ನಮ್ಮ ಸರ್ಕಾರಿ ಶಾಲೆಗಳಿಗೆ ಪ್ರವೇಶಕ್ಕೆ ಕ್ಯೂ ನಿಲ್ಲಬೇಕು ಎಂದರು.