ತೆಪ್ಪ ದುರಂತ: ಮತ್ತಿಬ್ಬರ ಶವ ಪತ್ತೆ, ಐದಕ್ಕೇರಿದ ಸಾವುತಾಲೂಕಿನ ಹಳೆ ಬಳೂತಿ ಬಳಿ ಕೃಷ್ಣಾ ನದಿ ಹಿನ್ನೀರಿನ ದಡದಲ್ಲಿ ಜೂಜಾಟವಾಡಲು ಹೋದ ವೇಳೆ ಪೊಲೀಸರು ದಾಳಿ ನಡೆಸಿದ್ದರೆಂಬ ಕಾರಣಕ್ಕೆ ಅವರಿಂದ ತಪ್ಪಿಸಿಕೊಂಡು ತೆಪ್ಪದಲ್ಲಿ ಹೋಗುತ್ತಿದ್ದಾಗ ಎಂಟು ಜನರಿದ್ದ ತೆಪ್ಪ ಮಂಗಳವಾರ ಮಗುಚಿ ನದಿಗೆ ಬಿದ್ದ ಘಟನೆಗೆ ಸಂಬಂಧಿಸಿದಂತೆ ಗುರುವಾರ ಮತ್ತಿಬ್ಬರ ಮೃತ ದೇಹಗಳು ಪತ್ತೆಯಾಗಿವೆ. ಈ ಮೂಲಕ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೇರಿದ್ದು, ಮೂರುದಿನಗಳ ಶೋಧ ಕಾರ್ಯ ಅಂತ್ಯಗೊಂಡಿತು.