ಕೈ ಕೋಟೆ ಕೆಡವಿ ಅರಳಿದ ಕಮಲ!ಕನ್ನಡಪ್ರಭ ವಾರ್ತೆ ವಿಜಯಪುರ ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೆಚ್ಚಿದೆ. ನಾಲ್ವರು ಶಾಸಕರು, ಇಬ್ಬರು ಸಚಿವರು ಇದ್ದಾರೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲವು ಸಾಧಿಸುತ್ತಾರೆ ಎಂಬ ಲೆಕ್ಕಾಚಾರಗಳು ಜೋರಾಗಿ ನಡೆದಿದ್ದವು. ಆದರೆ, ಸಚಿವರು, ಶಾಸಕ ಕ್ಷೇತ್ರದಲ್ಲೇ ಕೈ ಅಭ್ಯರ್ಥಿ ರಾಜು ಆಲಗೂರು ಅವರಿಗೆ ಹೆಚ್ಚಿನ ಮತಗಳು ದೊರೆಲಿಲ್ಲ. ಹೀಗಾಗಿ ಕೈ ಕೋಟೆಯನ್ನು ಬೇಧಿಸಿ ಕಮಲ ಅರಳಿದೆ.