ಮೇವಿಗಾಗಿ ಜಿಲ್ಲೆಯ ರೈತರ ಪರದಾಟವಿಜಯಪುರ: ಕುಡಿಯುವ ನೀರಾಯ್ತು, ಕೆಲಸವಿಲ್ಲದೇ ಜನರು ಗೂಳೆ ಹೋಗಿದ್ದಾಯ್ತು ಇದೀಗ ಪಂಚ ನದಿಗಳ ನಾಡಿನಲ್ಲಿ ದನಕರುಗಳಿಗೆ ಮೇವಿನದ್ದೆ ಸಮಸ್ಯೆಯಾಗಿದೆ. ಹಿಂದಿಗಿಂತಲೂ ಈ ಬಾರಿ ತೀವ್ರ ಬರ ಆವರಿಸಿರುವುದರಿಂದ ಬೆಳೆಗಳು ಸರಿಯಾಗಿ ಬೆಳೆದಿಲ್ಲ. ದವಸ-ಧಾನ್ಯಗಳಲ್ಲಿ ಕೊರತೆ ಕಾಡುತ್ತಿದೆ. ಮೇಲಾಗಿ ಜಾನುವಾರುಗಳಿಗೆ ನೀರು, ಮೇವು ಒದಗಿಸುವುದೇ ಈಗ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ, ತಮಗೆ ಆಧಾರವಾಗಿರುವ ದನಕರುಗಳನ್ನು ಕೈಗೆ ಬಂದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ, ಮಹಾರಾಷ್ಟ್ರ ಮತ್ತು ವಿಜಯಪುರ ಗಡಿಯಲ್ಲಿ ಜಾನುವಾರು ಹಾಗೂ ಮೇವು ಮಾರಾಟದ ಭರಾಟೆಯೂ ಜೋರಾಗಿದೆ.