ಬೇಡಿಕೆ ಈಡೇರಿಸದಿದ್ದರೆ ಮತದಾನ ಬಹಿಷ್ಕಾರ: ಎಚ್ಚರಿಕೆಇಂಡಿ: ತಾಲೂಕಿನ ನಿಂಬಾಳ ಕೆಡಿ ಗ್ರಾಪಂ ವ್ಯಾಪ್ತಿಯಲ್ಲಿನ 5ನೇ ವಾರ್ಡ್(ಹೊಸೂರಹಟ್ಟಿ)ಗೆ ಉತ್ತಮ ರಸ್ತೆ, ನ್ಯಾಯಬೆಲೆ ಅಂಗಡಿ, 24*7 ಕುಡಿಯುವ ನೀರು, ಬಸನಾಳವರೆಗೆ ರಸ್ತೆ ಡಾಂಬರೀಕರಣ ಮಾಡಬೇಕು. 1ನೇ ತರಗತಿಯಿಂದ 7 ನೇ ತರಗತಿವರೆಗೆ ಸರ್ಕಾರಿ ಶಾಲೆ ಒದಗಿಸಬೇಕು. ಇಲ್ಲವಾದರೆ 5 ನೇ ವಾರ್ಡ್(ಹೊಸೂರಹಟ್ಟಿ)ಮತಗಟ್ಟೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಹೊಸೂರಹಟ್ಟಿಯ ಜನರು ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.