ಶಿಕ್ಷಣವೆಂದರೆ ಓದು ಬರೆಯುವುದಲ್ಲ: ಶಿವಶರಣ ಗುಂದಗಿಆಲಮೇಲ: ಶಿಕ್ಷಣವೆಂದರೆ ಕೇವಲ ಓದು ಬರೆಯುವುದಲ್ಲ, ಒಳ್ಳೆಯ ನಡುವಳಿಕೆ, ಬದುಕುವ ಕಲೆ, ಕೌಶಲ, ಮೌಲ್ಯಗಳು, ನಡೆ-ನುಡಿ, ಆಚಾರ ಸಂಸ್ಕೃತಿ-ಸಂಸ್ಕಾರ ಬಿತ್ತಿ ಪರಿಪೂರ್ಣ ಮಾನವನ್ನಾಗಿ ಪರಿವರ್ತಿಸುವುದೆ ನಿಜವಾದ ಶಿಕ್ಷಣದ ಗುರಿ ಎಂದು ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ ಪಾಲಕರಿಗೆ ಸಲಹೆ ನಿಡಿದರು. ಪಟ್ಟಣದ ಭೀಮಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು.