ಜಯಶಾಂತಲಿಂಗೇಶ್ವರ ಮತ್ತು ದ್ವಾದಶ ಜ್ಯೋತಿರ್ಲಿಂಗಗಳ ಜಾತ್ರಾ ಮಹೋತ್ಸವವಿಜಯಪುರ: ಜಗದಾರಾಧ್ಯ ಜಯಶಾಂತಲಿಂಗೇಶ್ವರ ಮತ್ತು ದ್ವಾದಶ ಜ್ಯೋತಿರ್ಲಿಂಗಗಳ ಜಾತ್ರಾ ಮಹೋತ್ಸವ ಅದ್ಧೂರಿ ರಥ ಎಳೆಯುವುದರ ಮೂಲಕ ಸಂಪನ್ನಗೊಂಡಿತು. ನಗರದ ಉಕ್ಕಲಿ ರಸ್ತೆಯಲ್ಲಿನ ಜಯಶಾಂತಲಿಂಗೇಶ್ವರ ಬೃಹನ್ಮಠ, ವಿಶ್ವಶಾಂತಿ ಪೀಠದಲ್ಲಿ ಫೆ.22 ರಿಂದ ಫೆ.25ರ ವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳು, ಪ್ರವಚನ, ಉಪನ್ಯಾಸ ಗೋಷ್ಠಿಗಳು ಸೇರಿದಂತೆ ಅನೇಕ ಧಾರ್ಮಿಕ ಚಟುವಟಿಕೆಗಳಿಗೆ ಸಾಕ್ಷಿಯಾಯಿತು.