ತಾಲೂಕಲ್ಲಿ ಮೇವು ಬ್ಯಾಂಕ್ ಸ್ಥಾಪನೆಗೆ ಅಣಿಇಡೀ ಜಿಲ್ಲೆ ಬರಪೀಡಿತವೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಪರಿಣಾಮ ಜನರಿಗೆ ಮಾತ್ರವಲ್ಲ, ಜಾನುವಾರುಗಳ ಮೇಲೂ ಬೀರಿದೆ. ಆದರೆ, ಜನರು ಹೇಗೋ ಪಾರಾಗಬಹುದು. ಜಾನುವಾರುಗಳನ್ನು ಜನರೇ ರಕ್ಷಿಸಬೇಕಿದೆ. ಹೀಗಾಗಿ ಜಾನುವಾರುಗಳ ರಕ್ಷಣೆಗೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಪಟ್ಟಣದ ತೋಟಗಾರಿಕೆ ಆವರಣದಲ್ಲಿ ಶೀಘ್ರ ಮೇವು ಬ್ಯಾಂಕ್ ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ.