ಕೆರೂಟಗಿ ಗ್ರಾಪಂನಿಂದ ಸಂವಿಧಾನ ಜಾಗೃತಿ ಜಾಥಾದೇವರಹಿಪ್ಪರಗಿ: ಸಂವಿಧಾನದ ಮಹತ್ವ ಹಾಗೂ ಆಶಯಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ತಾಲೂಕಿನ ಕೆರೂಟಗಿ ಗ್ರಾಮ ಪಂಚಾಯಿತಿ ವತಿಯಿಂದ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಸಂವಿಧಾನ ರಚನೆಯ 75ನೇ ವರ್ಷದ ಅಂಗವಾಗಿ ನಡೆದ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧ ಚಿತ್ರಕ್ಕೆ ಹೂವಿನ ಮಾಲಾರ್ಪಣೆ ಮಾಡಿ, ಸಂವಿಧಾನ ಪೀಠಿಕೆಯ ಭಿತ್ತಿಪತ್ರಗಳನ್ನು ಹಿಡಿದು, ಪೂರ್ಣಕುಂಭದ ಮೂಲಕ ಸ್ವಾಗತ ಕೋರಲಾಯಿತು.