ಸಪ್ತ ಶೀಲಗಳನ್ನು ಅಳವಡಿಸಿಕೊಳ್ಳುವುದೆ ಶರಣ ಧಮ೯:ಡಾ.ಮಳಗಿವಿಜಯಪುರ: ಅಂತರಂಗ ಮತ್ತು ಬಹಿರಂಗ ಶುದ್ಧಿಮಾಡಿಕೊಂಡು ಸಪ್ತ ಶೀಲಗಳನ್ನು ಮೈಗೂಡಿಸಿಕೊಳ್ಳುವದೇ ಶರಣ ಧರ್ಮ ಎಂದು ಮಾಜಿ ಕುಲಸಚಿವ ಡಾ.ವಿ ವಿ ಮಳಗಿ ಹೇಳಿದರು. ನಗರದ ಕಸಾಪ ಸಭಾಂಗಣದಲ್ಲಿ ಜಿಲ್ಲಾ, ತಾಲೂಕ, ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಡೆದ ದತ್ತಿನಿಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಗರಿಕತೆ ಬೆಳೆದಂತೆ ವೈಚಾರಿಕತೆಯು ಬೆಳೆದು ಬಂದಿದೆ. ವೈಚಾರಿಕ ಕ್ರಾಂತಿಗೆ ಬಸವಣ್ಣನವರು ಬಹು ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.