ಬಸವ ನಾಡಲ್ಲಿ ನಿಲ್ಲುತ್ತಾ ಅಕ್ರಮ ಬಂದೂಕು ದಂದೆ?ಕನ್ನಡಪ್ರಭ ವಾರ್ತೆ ವಿಜಯಪುರಬಸವ ನಾಡು ವಿಜಯಪುರದಲ್ಲಿ ಅಕ್ರಮ ಪಿಸ್ತೂಲ್, ಬಂದೂಕುಗಳ ಸದ್ದಿಗೆ ಪೊಲೀಸರು ಅಲ್ಲಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಕಳೆದ 5 ದಶಕಗಳಿಂದ ಅದೆಲ್ಲೋ ತಯಾರಾಗುವ ಕಂಟ್ರಿಮೇಡ್ ಪಿಸ್ತೂಲ್ಗಳು ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ಸದ್ದು ಮಾಡಿದ್ದೇ ಹೆಚ್ಚು. ಭೀಮಾತೀರದ ಚಂದಪ್ಪ ಹರಿಜನ, ಪುತ್ರಪ್ಪ ಸಾಹುಕಾರ ಭೈರಗೊಂಡ, ಮಲ್ಲಿಕಾರ್ಜುನ ಚಡಚಣನ ಕಾಲದಿಂದಲೇ ಶುರುವಾದ ಕಂಟ್ರಿ ಪಿಸ್ತೂಲ್ಗಳ ಸದ್ದು ಬಾಗಪ್ಪ ಹರಿಜನನ ಅಂತ್ಯದವರೆಗೂ ಶಬ್ದ ಮಾಡುತ್ತಲೇ ಇವೆ.