ದುಃಖಕ್ಕೆ ಮದ್ದು ಕಂಡುಹಿಡಿದ ಮೊದಲ ವೈದ್ಯ ಗೌತಮಕನ್ನಡಪ್ರಭ ವಾರ್ತೆ ಇಂಡಿ ಬುದ್ಧನು ಅಹಿಂಸೆಯ ಪ್ರತಿಪಾದಕನಾಗಿದ್ದು, ಆತನ ತತ್ವಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ಸೊನಕನಳ್ಳಿ ಗ್ರಾಮದಲ್ಲಿ ಬುದ್ದ ಜಯಂತಿ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಬುದ್ಧ, ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಯುವಕ ಸಿದ್ದಾರ್ಥ ಗೌತಮರು ಸಮಾಜದಲ್ಲಿನ ತಾರತಮ್ಯ, ಅಸಮಾನತೆ, ಮೇಲುಕೀಳು, ಮೌಢ್ಯಗಳ ನಿವಾರಣೆಗಾಗಿ 29ನೇ ವಯಸ್ಸಿನಲ್ಲಿ ತನ್ನ ಸಂಸಾರಿಕ ಜೀವನ, ಸಂಪತ್ತು, ರಾಜ್ಯಾಧಿಕಾರ ತೊರೆದು ಸುಮಾರು 6 ವರ್ಷಗಳ ಸತತ ಧ್ಯಾನದ ಮೂಲಕ ತನ್ನ 35ನೇ ವಯಸ್ಸಿನಲ್ಲಿ ಪ್ರಾಕೃತಿಕ ಜ್ಞಾನೋದಯ ಪಡೆಯುತ್ತಾರೆ.