ಉತ್ತಮ ಆರೋಗ್ಯಕ್ಕೆ ಸ್ವಯಂ ಕೃಷಿ ಅವಶ್ಯಕನ್ನಡಪ್ರಭ ವಾರ್ತೆ ವಿಜಯಪುರ ಈ ನಾಡಿನ ಸಮಸ್ತ ಜನತೆಗೆ ಅನ್ನವನ್ನು ನೀಡುವ ರೈತ, ಕೈಚೀಲ ಹಿಡಿದು ಮಾರುಕಟ್ಟೆಗೆ ಯಾರು ಹೋಗುತ್ತಾರೋ ಅವನಿಗೆ ರೈತ ಎಂದು ಹೇಳಲು ಸಂಕೋಚವಾಗುತ್ತದೆ. ತಮ್ಮ ಅಡಿಗೆ ಬೇಕಾಗುವ ಎಲ್ಲಾ ಹಣ್ಣು ತರಕಾರಿಗಳನ್ನು ವಿಷಮುಕ್ತವಾಗಿ ಬೆಳೆದು ಬಳಸಬೇಕು, ಕುಟುಂಬದ ಎಲ್ಲರ ಬೆಲೆಬಾಳುವ ಶರೀರವನ್ನು ಕಾಪಾಡಬೇಕಾದರೆ ಸ್ವಯಂ ಕೃಷಿ ಬಹಳ ಅವಶ್ಯವಿದೆ ಎಂದು ಗದುಗಿನ ಕಪ್ಪತ್ತಗುಡ್ಡದ ಶಿವಕುಮಾರ ಸ್ವಾಮೀಜಿ ಹೇಳಿದರು.