ಪುರಸಭೆಯ 3.92 ಕೋಟಿ ಉಳಿಕೆ ಬಜೆಟ್ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಪಟ್ಟಣ ಪುರಸಭೆಯ 2025-26ರ ಸಾಲಿನ ಅಂದಾಜು ಆಯವ್ಯಯ ಪಟ್ಟಿಯನ್ನು ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ ಸದಸ್ಯರ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಸೋಮವಾರ ಪ್ರಕಟಿಸಿದರು. ಒಟ್ಟು ಅಂದಾಜು ಆರಂಭ ಶುಲ್ಕ ₹ 3.91 ಕೋಟಿ, ಬಂಡವಾಳ ಸ್ವೀಕೃತಿಗಳು ₹ 3.12 ಕೋಟಿ, ಅಸಾಧಾರಣ ಸ್ವೀಕೃತಿಗಳು ₹ 2.09 ಕೋಟಿ ಒಟ್ಟು 16.88 ಕೋಟಿ ವೆಚ್ಚಗಳು ರಾಜಸ್ವ ಪಾವತಿಗಳು ₹ 11.58 ಕೋಟಿ, ಬಂಡವಾಳ ಪಾವತಿಗಳು 3.20 ಕೋಟಿ ಒಟ್ಟು ವೆಚ್ಚ 16.87 ಕೋಟಿ, ಒಟ್ಟು ಶುಲ್ಕ ₹ 13.75 ಕೋಟಿ, ಅಂದಾಜು ಅಂತಿಮ ಶುಲ್ಕ ₹ 3.92 ಕೋಟಿ ಉಳಿಕೆ ಎಂದು ವಿವರಿಸಿದರು.