ನಗರದ್ಲೇ ಒಣ ಮೆಣಸಿನಕಾಯಿ ಆನಲೈನ್ ಮಾರ್ಕೆಟ್: ಅಧ್ಯಕ್ಷ ರವೀಂದ್ರವಿಜಯಪುರ: ವಿಜಯಪುರ, ಬಾಗಲಕೋಟೆ, ಕಲಬುರಗಿ, ರಾಯಚೂರು, ಮಹಾರಾಷ್ಟ್ರ ಭಾಗದಲ್ಲಿ ಒಣ ಮೆಣಸಿನಕಾಯಿ ಬೆಳೆದು ಸೂಕ್ತ ಮಾರುಕಟ್ಟೆ ಇಲ್ಲದೆ ಗೋಳಾಡುತ್ತಿದ್ದ ಈ ಭಾಗದ ರೈತರಿಗೆ ಸಿಹಿಸುದ್ದಿ ಸಿಕ್ಕಿದೆ. ಇನ್ನು ಮುಂದೆ ವಾರದಲ್ಲಿ ಎರಡು ದಿನ ಅಂದರೆ ಪ್ರತಿ ಮಂಗಳವಾರ ಹಾಗೂ ಪ್ರತಿ ಶುಕ್ರವಾರ ಇ-ಟೆಂಡರ್ ಮೂಲಕ ವಿಜಯಪುರ ಎಪಿಎಂಸಿ ಮಾರುಕಟ್ಟೆಯಲ್ಲಿಯೇ ಒಣ ಮೆಣಸಿನಕಾಯಿ ವಹಿವಾಟು ನಡೆಸಲಾಗುತ್ತಿದೆ ಎಂದು ಮರ್ಚಂಟ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ ತಿಳಿಸಿದ್ದಾರೆ.