ಎರಡು ಅಕ್ರಮ ಪಿಸ್ತೂಲ್ ವಶ, ಆರೋಪಿ ಬಂಧನಕನ್ನಡಪ್ರಭ ವಾರ್ತೆ ವಿಜಯಪುರ ಎರಡು ಅಕ್ರಮ ಪಿಸ್ತೂಲ್ ಸೇರಿದಂತೆ 4 ಸಜೀವ ಗುಂಡುಗಳು ವಶಪಡಿಸಿಕೊಂಡಿರುವ ಘಟನೆ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಎಪಿಎಂಸಿ ಠಾಣೆಯ ಪೊಲೀಸರು ಖಚಿತ ಮಾಹಿತಿ ಆಧರಿಸಿ, ವಿಜಯಪುರ ನಗರದ ಇಂಡಿ ಬೈಪಾಸ್ ಹತ್ತಿರ, ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಆರೋಪಿ ಗ್ಯಾಂಗ್ ಬಾವಡಿಯ ಕುಂಬಾರಗಲ್ಲಿಯ ಉಮೇರ್ ಬಂದೇನವಾಜ್ ಗಿರಗಾಂವ (23) ಸೆರೆ ಸಿಕ್ಕಿದ್ದು, ಬಂಧಿಸಿದ್ದಾರೆ.