ಇಂಡಿಯಲ್ಲಿ ಬೃಹತ್ ತಿರಂಗಾ ಯಾತ್ರೆ ಸಂಭ್ರಮಕನ್ನಡಪ್ರಭ ವಾರ್ತೆ ಇಂಡಿ ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ನಿಮಿತ್ತ ಇಂಡಿಯಲ್ಲಿ ಬೃಹತ್ ತಿರಂಗಾ ಯಾತ್ರೆ ನಡೆಯಿತು. ಪಟ್ಟಣದ ಶಿವಾಜಿ ವೃತ್ತದಲ್ಲಿ ತಿರಂಗ ಯಾತ್ರೆಗೆ ಅಭಿನವ ರಾಚೋಟೇಶ್ವರ ಅಭಿನವ ಮುರುಘೇಂದ್ರ, ಶಿವಾನಂದ ಶಿವಾಚಾರ್ಯರು, ಸಂಸದ ರಮೇಶ ಜಿಗಜಿಣಗಿ ಚಾಲನೆ ನೀಡಿದರು. ಶಿವಾಜಿ ವೃತ್ತದಿಂದ ಆರಂಭಗೊಂಡು ಮಹಾವೀರ, ಅಂಬೇಡ್ಕರ ವೃತ್ತದ ಮೂಲಕ ನಡೆದು ಬಸವೇಶ್ವರ ವೃತ್ತ ತಲುಪಿತು.