ಶ್ರಾವಣ ಮಾಸದಲ್ಲಿ ಶರಣವೃತ ಸ್ವೀಕಾರಬಸವನಬಾಗೇವಾಡಿ: ಪಟ್ಟಣದ ವಿರಕ್ತಮಠದಲ್ಲಿ ಶುಕ್ರವಾರ ಶ್ರಾವಣ ಮಾಸದಂಗವಾಗಿ ಶ್ರೀಮಠದ ಸಿದ್ದಲಿಂಗ ಸ್ವಾಮೀಜಿಗಳ ಸಾನಿಧ್ಯದಲ್ಲಿ ಶರಣವೃತ ಸ್ವೀಕರಿಸಿದರು. ಬೆಳಗ್ಗೆ 6 ಗಂಟೆಗೆ ವಿವಿಧ ಶರಣ-ಶರಣೆಯರು ಶ್ರೀಗಳ ಸಾನಿಧ್ಯದಲ್ಲಿ ಲಿಂಗಪೂಜೆ, ವಚನಗಾಯನ, ಅನುಭಾವದೊಂದಿಗೆ ಶರಣ ವೃತ ಸ್ವೀಕರಿಸಿದರು.