ಸೆಕ್ಯೂರಿಟಿ ಇಲ್ಲದ ಬ್ಯಾಂಕ್‌ನಲ್ಲಿ ಹಗಲು ದರೋಡೆ?ಕನ್ನಡಪ್ರಭ ವಾರ್ತೆ ವಿಜಯಪುರ ಮೊದಲಿನಿಂದಲೂ ಭೀಮಾ ತೀರ ಕೊಲೆ ಸುಲಿಗೆಗಳಿಗೆ ಖ್ಯಾತಿ ಪಡೆದಿತ್ತು. ಇದೀಗ ಬ್ಯಾಂಕ್ ದರೋಡೆಗಳಿಗೆ ಖ್ಯಾತಿ ಪಡೆಯುತ್ತಿರುವ ಆರೋಪ ಕೇಳಿಬರುತ್ತಿದೆ. ಕಳೆದ ಮೇ 25ರಂದು ಬಸವನಬಾಗೇವಾಡಿ ತಾಲೂಕಿನ ಮನಗೂಳಿಯ ಕೆನರಾ ಬ್ಯಾಂಕ್ ಕಳ್ಳತನ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಮಾತ್ರವಲ್ಲ, ರಾಜ್ಯದ ಅತಿದೊಡ್ಡ ಕಳ್ಳತನ ಪ್ರಕರಣ ಇದಾಗಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ ₹ 40 ಕೋಟಿ ಮೌಲ್ಯದ 39 ಕೆಜಿ ಚಿನ್ನಾಭರಣ ಹಾಗೂ ₹5 ಲಕ್ಷ ನಗದನ್ನು ಅಪರಿಚಿತರು ಹಾಡಹಗಲೇ ಬಂದು ದೋಚಿಕೊಂಡು ಪರಾರಿಯಾಗಿದ್ಧಾರೆ.