ಗಡಿಯಲ್ಲಿ ವರುಣಾಬ್ಬರ, ಜನಜೀವನ ತತ್ತರಕನ್ನಡಪ್ರಭ ವಾರ್ತೆ ಇಂಡಿ ಮಹಾರಾಷ್ಟ್ರ ಉಜನಿಯ ಜಲಾಶಯ ಮತ್ತು ಭೀಮಾನದಿ ಪಾತ್ರದಲ್ಲಿ ಧಾರಾಕಾರ ಮಳೆಯಾಗಿದ್ದರಿಂದ ಇಂಡಿ ತಾಲೂಕಿನ ಅವಾಂತರವೇ ಸೃಷ್ಟಿಯಾಗಿದೆ. ತಾಲೂಕಿನ ಅರ್ಜುಣಗಿ ಬಿ ಕೆ ಗ್ರಾಮ ಬಳಿಯ ತೋಟದ ವಸ್ತಿಗಳ ಮನೆಗಳಿಗೆ ನೀರು ನುಗ್ಗಿದ್ದು, ತಗಡಿನ ಶೆಡ್‌ಗಳಲ್ಲಿ ವಾಸವಿದ್ದ ಸುಮಾರು 20 ಜನರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ರಕ್ಷಣೆಗಾಗಿ ಮೊರೆಯಿಡುತ್ತಿದ್ದರು, ಬಳಿಕ ಅವರನ್ನು ಸ್ಥಳೀಯರೇ ಹೆಗಲ ಮೇಲೆ ಹೊತ್ತು ಹೊರತರುವ ಮೂಲಕ ಅಪಾಯದಿಂದ ರಕ್ಷಣೆ ಮಾಡಿದ್ದಾರೆ.