ಸ್ತ್ರೀ ಎಂದರೆ ಬರೀ ಹೆಣ್ಣಲ್ಲ, ಚೈತನ್ಯ ಸ್ವರೂಪಿಕನ್ನಡಪ್ರಭ ವಾರ್ತೆ ವಿಜಯಪುರ ಸ್ತ್ರೀ ಎಂದರೆ ಬರೀ ಹೆಣ್ಣಲ್ಲ ಅವಳೊಂದು ಅದ್ಭುತ ಶಕ್ತಿ, ಚೈತನ್ಯ ಸ್ವರೂಪಿ, ಸಮಾಜದ ಬಹುಮುಖ್ಯ ಅಂಗ ಎಂದು ಶಿಕ್ಷಕಿ ನೀಲಮ್ಮ ಹತ್ತಳ್ಳಿ ಬಣ್ಣಿಸಿದರು. ನಗರದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಶ್ರೀ ರಾಜರಾಜೇಶ್ವರಿ ಮಹಿಳಾ ಕಲಾ ಸಂಘದಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಕಲಾವಿದರ ಮನದಂಗಳ ಚಿತ್ರಕಲಾ ಶಿಬಿರ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.