ಸಮೀಕ್ಷೆಗೆ ಸರ್ವರ್, ಇಂಟರ್ನೆಟ್ ವಿಘ್ನ...!ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ರಾಜ್ಯ ಸರ್ಕಾರ ಹಲವು ಆಕ್ಷೇಪ, ಟೀಕೆಗಳ ಮಧ್ಯೆಯೇ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಆರಂಭಿಸಿದೆ. ಆದರೆ, ತಾಲೂಕಿನಾದ್ಯಂತ ಶಿಕ್ಷಕರು ಮತ್ತು ಗಣತಿದಾರರು 4ನೇ ದಿನವೂ ಹಲವು ರೀತಿಯ ಅಡೆತಡೆಗಳು ಹಾಗೂ ಸಮೀಕ್ಷೆ ವೇಳೆ ಸರ್ವರ್ ಸಮಸ್ಯೆ, ತಾಂತ್ರಿಕ ದೋಷ, ವಿದ್ಯುತ್ ಯುಎಚ್ಐಡಿ ನಂಬರ್ ಅಸ್ಪಷ್ಟ, ಮನೆ ಪಟ್ಟಿ, ಸರಿಯಾದ ಜಿಯೋ ಮ್ಯಾಪಿಂಗ್ ಇಲ್ಲದಿರುವುದು ಕಂಡುಬಂದಿದೆ. ಮಾತ್ರವಲ್ಲ, ಮಾಹಿತಿ ಕೊರತೆಯಿಂದಾಗಿ ಸಾರ್ವಜನಿಕರು ಸೂಕ್ತ ದಾಖಲೆಗಳನ್ನು ನೀಡದಿರುವುದು, ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆ, ಸಮೀಕ್ಷೆಗಾಗಿ ತಯಾರಿಸಿರುವ ಆ್ಯಪ್ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವ ಸಮಸ್ಯೆಗಳನ್ನು ಸಮೀಕ್ಷಾ ಸಿಬ್ಬಂದಿ ಎದುರಿಸುತ್ತಿದ್ದಾರೆ.