ಪೇಪರ್‌ನಲ್ಲಿ ಮಾತ್ರ ಚಡಚಣ ಏತ ನೀರಾವರಿ ಪೂರ್ಣಕನ್ನಡಪ್ರಭ ವಾರ್ತೆ ಚಡಚಣ ಸುಮಾರು ₹ 500 ಕೋಟಿ ವೆಚ್ಚದಲ್ಲಿ ಪ್ರಾರಂಭವಾದ ಚಡಚಣ ಏತ ನೀರಾವರಿ ಯೋಜನೆಯೂ ಸಂಪೂರ್ಣ ಹಳ್ಳ ಹಿಡಿದಿದೆ. ಕೆಲಸ ಮಾಡದೇ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಕಾಂಟ್ರ್ಯಾಕ್ಟರ್ ಸೇರಿ ಯೋಜನೆಯನ್ನು ಪೇಪರ್‌ನಲ್ಲಿ ಪೂರ್ಣಗೊಳಿಸಿ, ಸರ್ಕಾರಕ್ಕೆ ತಪ್ಪು ಮಾಹಿತಿ ಸಲ್ಲಿಸಿ ಹಣ ಲೂಟಿ ಮಾಡಿದ್ದಾರೆ. ಕೂಡಲೇ ಸರ್ಕಾರ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರ ಜಮೀನುಗಳಿಗೆ ನೀರು ಹರಿಸದಿದ್ದಲ್ಲಿ ರೈತರೊಂದಿಗೆ ಸೇರಿ ಉಗ್ರ ಹೋರಾಟ ಮಾಡುವುದಾಗಿ ಸಂಸಸ ರಮೇಶ ಜಿಗಜಣಗಿ ಎಚ್ಚರಿಕೆ ನೀಡಿದ್ದಾರೆ.