ರೈತರ ಬೆಳೆಗೆ ಯೋಗ್ಯ ದರ ನೀಡುವ ಪ್ರಧಾನಿ ಅಗತ್ಯವಿದೆಕನ್ನಡಪ್ರಭ ವಾರ್ತೆ ಕೊಲ್ಹಾರ ದೇಶದಲ್ಲಿ ರೈತರು ಪರಿಶ್ರಮದಿಂದ ಬೆಳೆದ ಬೆಳೆಗೆ ಯೋಗ್ಯ ದರ ನೀಡುವ ಶಕ್ತಿ ಇರುವ ಪ್ರಧಾನಿ ನಮ್ಮ ದೇಶಕ್ಕೆ ಸಿಕ್ಕಿಲ್ಲ ಎಂಬುದು ರೈತರ ದುರ್ದೈವ. ಒಂದೊಮ್ಮೆ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡಿದರೆ ಸಾಕು, ನಾವು ಇನ್ನಾವುದೇ ಸೌಲಭ್ಯ ನೀಡದಿದ್ದರೂ ನಮ್ಮ ರೈತರಿಗೆ, ದೇಶಕ್ಕೆ ಸಾಲ ನೀಡುವ ಶಕ್ತಿ ಬರಲಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.