ಹಣ ಸಂಗ್ರಹಿಸಿ ಶವ ಸಾಗಿಸಲು ನೆರವಾದ ಪೊಲೀಸರುಕನ್ನಡಪ್ರಭ ವಾರ್ತೆ ಇಂಡಿ ರಾಜಸ್ಥಾನ ಮೂಲದ 14 ವರ್ಷದ ಮಗನನ್ನು ಕಳೆದುಕೊಂಡು ಶವವನ್ನು ತನ್ನೂರಿಗೆ ತೆಗೆದುಕೊಂದು ಹೋಗಲು ಪರದಾಡುತ್ತಿದ್ದ ತಾಯಿಗೆ ನೆರವಾಗುವ ಮೂಲಕ ಇಂಡಿ ಪೊಲೀಸರು ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.ರಾಜಸ್ಥಾನ ಮೂಲದ ತೇಜಪಾಲ್ ಜಗದೀಶ ಎಂಬ ಬಾಲಕ ಕಾಮಾಲೆ ಕಾಯಿಲೆಯಿಂದ ಮೃತಪಟ್ಟಿದ್ದು, ಬಡಕುಟುಂಬವಾಗಿದ್ದರಿಂದ ಮಗನ ಶವ ಸಾಗಿಸಲು ಹಣವಿಲ್ಲದ್ದರಿಂದ ಬಾಲಕನ ತಾಯಿಗೆ ಡಿವೈಎಸ್ಪಿ ಜಗದೀಶ್ ಮಾರ್ಗದರ್ಶನದಲ್ಲಿ ಎಎಸ್ಐ ಎಸ್.ಎಸ್.ತಳವಾರ, ಜಗದೀಶ ನಿಲೂರೆ, ಚಂದ್ರಶೇಖರ ಕಂಬಾರ ಹಾಗೂ ಸ್ಥಳೀಯ ಸುನೀಲಗೌಡ ಬಿರಾದಾರ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಅಂಬ್ಯುಲೆನ್ಸ್‌ನಲ್ಲಿ ಶವವನ್ನು ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಿದ್ದಾರೆ.