ಆಧ್ಯಾತ್ಮ ಸಾಧನೆಗಳಿಂದ ಹೃದಯ ಪರಿವರ್ತನೆ ಸಾಧ್ಯಕನ್ನಡಪ್ರಭ ವಾರ್ತೆ ಇಂಡಿ ಸಾಧುಸಂಗ, ವೇದಾಂತ, ಆಧ್ಯಾತ್ಮ ಸಾಧನೆಗಳಿಂದ ಹೃದಯ ಪರಿವರ್ತನೆ ಸಾಧ್ಯ. ಮನೆ, ಮನಸ್ಸು, ಹೃದಯ, ದೇವ ಮಂದಿರವಾಗಬೇಕು. ಆಧುನಿಕ ಯುಗದಲ್ಲೂ ಮಹಾತ್ಮರ ಉಪದೇಶ ಪ್ರಸ್ತುತವಾಗಿದ್ದು, ಕರ್ತವ್ಯ, ಧರ್ಮ ಪಾಲನೆಗೆ ಒತ್ತು ನೀಡಬೇಕು ಎಂದು ಬೀದರ ಚಿದಂಬರಾಶ್ರಮದ ಡಾ.ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.ತಾಲೂಕಿನ ಆಳೂರ ಗ್ರಾಮದಲ್ಲಿ ಸಂಜೆ ನಡೆದ ಸಿದ್ಧಾರೂಢರ ನೂತನ ಮಂದಿರದ ಕಳಸಾರೋಹಣ ಹಾಗೂ ಲಕ್ಷ್ಮೀಬಾಯಿ ತಾಯಿಯವರ, ಪಾರ್ವತೆಮ್ಮನವರ ಮೂರ್ತಿ ಪ್ರಾಣಪ್ರತಿಷ್ಠಾಪನೆ 55ನೇ ಆಧ್ಯಾತ್ಮಿಕ ಪ್ರವಚನ ಮಹೋತ್ಸವದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.