ನಿಯಮಾನುಸಾರವೇ ರಸ್ತೆ ಅಗಲೀಕರಣ ಆಗಿದೆಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ಹೂವಿನಹಿಪ್ಪರಗಿ-ಕಾಮನಕೇರಿ-ಯಾಳವಾರ ಜಿಲ್ಲಾ ಮುಖ್ಯರಸ್ತೆಯ ಅಗಲೀಕರಣವನ್ನು ನಿಯಮಾನುಸಾರವೇ ಮಾಡಲಾಗಿದೆ. ಆದರೆ, ಈ ಬಗ್ಗೆ ಬಸವನಬಾಗೇವಾಡಿಯಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಇದರಲ್ಲಿ ನಮ್ಮ ಪಾತ್ರವೇನು ಇಲ್ಲವೆಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.